Wednesday, August 24, 2022

ವಂದಿಪೇ ಗಣನಾಥ

ಬಂದಿತು ಗಣಪತಿ ಹಬ್ಬ 
ತಂದಿತು ಸಂತಸ ಸಂಭ್ರಮ
ವಿಶ್ವದಾದ್ಯಂತ ಆಚರಣೆಗೆ
ಅಣಿಯಾಯಿತು ಜನಮನ
ಭಕ್ತಿ ಭಾವಕೆ ಒಲಿಯುವ ಗಣಪ
ಭಕ್ತನಿಗೆ ನೀಡುವ ಸಕಲ ಸಂಪದವ
ಬನ್ನಿ ಎಲ್ಲರೂ ಅವನ ಆರಾಧಿಸಲು
ಆಗಲಿ ಜಗತ್ತಿಗೆ ಶಾಂತಿ ಸೌಹಾರ್ದ ಯೋಗ
ವರ್ಷ ವರ್ಷಕ್ಕೆ ಅವನ ಒಲುಮೆಯಿಂದ
ಬಾಳಿ ಬೆಳಗಲಿ ವಿಶ್ವ ಸುಖ ಸಮೃದ್ಧಿಯಿಂದ.

 









No comments:

Post a Comment